Knowledge builds Excellence Here
Knowledge builds Excellence Here
"ದೇಶದಲ್ಲಿ ಹುಳು ತಿಂದುಹೋಗದೆ ಇರುವ ಗ್ರಂಥಗಳನ್ನೆಲ್ಲ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು. ಅಚ್ಚಾದ ಮೇಲೆ ಎಲ್ಲವನ್ನೂ ಕೊನೆಮುಟ್ಟಿ ಶೋಧಿಸಿ ಹೊಸದಾಗಿ ಲಕ್ಷಣ ಗ್ರಂಥಗಳನ್ನು ಕಾಲಕ್ಕೆ ತಕ್ಕಂತೆ ರಚಿಸುವುದು." .
ಇದು ಆಚಾರ್ಯ ಬಿ.ಎಮ್ ಶ್ರೀ ಯವರ ಆಶಯವಾಗಿತ್ತು. ಅವರ ವಿಚಾರ ಹೊರಬಂದದ್ದು 1911 ರ ಸುಮಾರಿನಲ್ಲಿ. ಆಗ್ಗೆ ಆಗಬೇಕಾದ ಕೆಲಸ ಬಹಳಷ್ಟಿದ್ದು, ಆರಂಭವಾಗಬೇಕಾಗಿತ್ತು.ಪುಸ್ತಕ ಅಥವಾ ಗ್ರಂಥದ ಪ್ರಕಾಶನ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಪುಸ್ತಕವನ್ನು ಓದುವವರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ತತ್ಪರಿಣಾಮವಾಗಿ ಪ್ರಕಾಶನ ಮತ್ತು ಪ್ರಕಟಣಾ ವೆಚ್ಚಗಳು ಬಹಳ ದುಬಾರಿಯಾಗಿವೆ ಜೊತೆಗೆ ಡಿಜಟಲೀಕರಣ ಹೆಚ್ಚು ಬೆಳೆಯುತ್ತಿದ್ದು ವಿದ್ಯುನ್ಮಾನ ಪ್ರಕಾಶನ ಸಾಧ್ಯತೆಗಳು ಹೆಚ್ಚಿವೆಯಾದ್ದರಿಂದ ಹೊರನಾಡ ಕನ್ನಡಿಗರನ್ನು ಸುಲಭವಾಗಿ ತಲುಪಬಹುದಾಗಿವೆ.
ಜನರಲ್ಲಿ ಕುಶಲತೆಯನ್ನೂ ಭಾಷಾ ಪ್ರೌಢಿಮೆಯನ್ನೂ ಬೆಳೆಸಲು ಪ್ರಯತ್ನಿಸುತ್ತಿರುವ ಕೌಶಲ್ ವಿಕಾಸ ಪ್ರತಿಷ್ಠಾನವು ಕನ್ನಡಿಗರಿಗಾಗಿ, ಅದರಲ್ಲಿಯೂ ಹೊರನಾಡ ಕನ್ನಡಿಗರಿಗಾಗಿ ಎರಡು ಮಜಲುಗಳಲ್ಲಿ ಕಾರ್ಯಗಳನ್ನು ಹಮ್ಮಿಕೊಂದಿದೆ. ಮಕ್ಕಳಲ್ಲಿ ಪದ್ಯ, ಕವಿತೆ, ಕವನ ಕಥೆಗಳ ಮೂಲಕ ಭಾಷೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸಲು “ಆರಂಭಿಕ ಅಭ್ಯಾಸಿಗಳಿಗಾಗಿ” ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಅಂತೆಯೇ ಪ್ರೌಢರಿಗಾಗಿ ಸಂಶೋಧನಾ ಅಭ್ಯಾಸದವರೆಗೆ ಅನುಕೂಲವನ್ನು ಕಲ್ಪಿಸಲು ಯೋಚಿಸಲಾಗಿದೆ.
ಕನ್ನಡ ಭಾಷೆ, ಸಂಸ್ಕೃತಿಗಳು ವಿಶ್ವದ ಸಾಹಿತ್ಯ, ಪ್ರಪಂಚದಲ್ಲಿ ಒಂದು ಅತ್ಯಮೂಲ್ಯ ಸ್ಥಾನವನ್ನು ಹೊಂದಿದೆ. ಇಂದಿಗೂ ವಿಶ್ವದ ಅನೇಕ ದೇಶಗಳಲ್ಲಿ ಇರುವ ಭಾರತೀಯರಲ್ಲಿ ಕನ್ನಡಿಗರ ಶೇಕಡಾವಾರು ಸಹ ಗಣನೀಯದ್ದೇ ಆಗಿದೆ. ಡಾ.ಡಿ.ವಿ.ಜಿ ಯವರ “ವನಸುಮದೋಲ್ ಎನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ..” ಎಂಬ ಆಶಯವು ನಿಜಗೊಂಡು ಕನ್ನಡದ ಸೌರಭವು ವಿಶ್ವದೆಲ್ಲೆಡೆ ಇಂದಿಗೂ ಪಸರಿಸುತ್ತಲೇ ಇದೆ.
ಕನ್ನಡದ ಸಾಹಿತ್ಯ ಭಾಂಡಾಗಾರವು ಅದಿಕವಿ ಪಂಪನಿಂದ ಮೊದಲಾಗಿ ರನ್ನ, ಪೊನ್ನ, ಜನ್ನ, ಹರಿಹರ ,ರಾಘವಾಂಕ, ಕುಮಾರವ್ಯಾಸರಾದಿಯಾಗಿ, ಹರಿದಾಸರ ಮತ್ತು ವಚನಕಾರರ ಪರಂಪರೆಯನ್ನು ಸುತ್ತಿಕೊಂದು ಆಧುನಿಕ ಜಗತ್ತಿನ ನವೋದಯ, ನವ್ಯ, ಆಧುನಿಕ, ಬಂಡಾಯ, ವಿಚಾರ ಸಾಹಿತ್ಯ ಪ್ರಕಾರಗಳನ್ನೊಳಗೊಂಡು ಸಂಪಧ್ಭರಿತವಾಗಿ ಕಂಗೊಳಿಸುತ್ತಲಿದೆ.
ಈ ಕನ್ನಡನಾಡಿನ ಮಧುರ ಸೊಬಗನ್ನು ವಿಶ್ವ ವ್ಯಾಪಿಯನ್ನಾಗಿ ಮಾಡುವ ಯೋಚನೆಯೂ ಕನ್ನಡದ ಕವಿಯದ್ದೇ. ಜಡಚೇತನವನ್ನು ಬಡಿದೆಬ್ಬಿಸಿ ‘ಅನಿಕೇತನ’ವನ್ನಾಗಿ ಮಾಡುವ ವಿಶ್ವಮಾನವ ಸಂದೇಶವನ್ನು, “ಮನುಜ ಮತ ವಿಶ್ವ ಪಥ”ವನ್ನೂ ಜಗತ್ತಿಗೆ ನೀಡಿದ ರಾಷ್ಟ್ರಕವಿ ಕು ವೆಂ ಪು ರವರ ವಿಚಾರವನ್ನು ಮೆಚ್ಚುವ ವಿಶ್ವದೆಲ್ಲೆಡೆಯ ಹೊರನಾಡ ಕನ್ನಡಿಗರಿಗಾಗಿ, ಅವರ ಕುಟುಂಬದವರಿಗಾಗಿ, ಮಕ್ಕಳಿಗಾಗಿ ಕನ್ನಡದ ರಸದೌತಣವನ್ನು ಕಾಲಕಾಲಕ್ಕೆ ದೊರಕಿಸಿಕೊಡುವ ಸಣ್ಣ ಪ್ರಯತ್ನವನ್ನು ಕೌಶಲ್ ವಿಕಾಸ ಪ್ರತಿಷ್ಠಾನವು ಕೈಗೆತ್ತಿಕೊಂದಿದೆ. ಮೊದಲ ಹಂತದಲ್ಲಿ ಮಕ್ಕಳ ಸಾಹಿತ್ಯ ಮತ್ತು ಹೊರನಾಡ ಮಕ್ಕಳಿಗೆ ಕನ್ನಡ ವ್ಯಾಕರಣ, ಛಂದಸ್ಸಿನ ಪರಿಚಯವನ್ನು ಮಾ ಡಿಕೊಡುವ ಕಾರ್ಯಕ್ರಮವನ್ನು ಈ ವರ್ಷದ ನವೆಂಬರ್ 1ನೇ ತಾರೀಖಿನಿಂದ ಆರಂಭಿಸಿದೆ.
ಭಾಷೆ,ಸಂಸ್ಕೃತಿ,ಸಾಹಿತ್ಯದ ಪರಿಚಯದ ಮೂಲಕ ಇಡೀ ಮನುಜ ಕುಲದ ಐಕ್ಯತೆ ಸಾಧ್ಯವೆಂದು ನಂಬಿರುವ ಅಮೇರಿಕೆಯ “ವಿಶ್ವ ಸಂವಿಧಾನ ಮತ್ತು ಸಂಸದು ಸಂಘ” ವು , ಈ ಕಾರ್ಯದಲ್ಲಿ ಕೌಶಲ್ ವಿಕಾಸ ಪ್ರತಿಷ್ಠಾನ ಸಂಸ್ಥೆಯೊಡನೆ ಕೈಜೋಡಿಸಿರುವುದನ್ನು ಕೃತಜ್ಞತೆಯಿಂದ ಸ್ಮರಿಸಲಾಗಿದೆ.
ಕೌಶಲ್ ವಿಕಾಸ್ ಪ್ರತಿಷ್ಠಾನವು ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಗುಂಡಿಯನ್ನು ಒತ್ತಿರಿ ಅಥವಾ ಮಿಂಚಂಚೆಯ ಮೂಲಕ ಮುಂದಿನ ವಿಳಾಸಕ್ಕೆ ಬರೆಯಿರಿ. ವಿಳಾಸ: director@koushalvikasfoundation.org
ಹೆಸರಾಂತ ಕನ್ನಡ ಪ್ರಾಧ್ಯಾಪಕರು,ಸಾಹಿತಿಗಳು, ಕವಿಯಿತ್ರಿ, ವಿಮರ್ಶಕರು
ವಾಣಿಜಿಕ ಪ್ರಾಧ್ಯಾಪಕರು , ಬರಹಗಾರರು, ಸಂಶೋಧನಕಾರರು, ಕೌಶಲ್ ವಿಕಾಸ ಪ್ರತಿಷ್ಠಾನದ ಸಂಸ್ಥಾಪಕರು ಮತ್ತು ಅಮೇರಿಕೆಯ ವಿಶ್ವ ಸಂವಿಧಾನ ಮತ್ತು ಸಂಸತ್ ಸಂಘದ ಉಪಾಧ್ಯಕ್ಷರು ಮತ್ತು ವಿಶ್ವ ಕನ್ನಡ ಕೇಂದ್ರದ ಸಂಚಾಲಕರು.
ಮುಖ್ಯಸ್ಥೆ, ಕನ್ನಡ ವಿಭಾಗ, SFGC, ಯಲಹಂಕ
ಹೆಸರಾಂತ ಕನ್ನಡ ಪ್ರಾಧ್ಯಾಪಕರು, ಬರಹಗಾರು,ಗ್ರಂಥ ಸಂಪಾದಕರು, ಕನ್ನಡದ ಏಳಿಗೆಗೆ ಶ್ರಮಿಸುತ್ತಿರುವವರು.
ಪ್ರಾಚಾರ್ಯರು, ಕನ್ನಡ ಪ್ರಾಧ್ಯಾಪಕರು, ಸಂಶೋಧನಕಾರರು,
ಕನ್ನಡ ಭಾಷೆ ಸುಲಲಿತ ಮತ್ತು ಸುಮಧುರವಾಗಿದ್ದು ಅಗಾಧವಾದ ಸಾಹಿತ್ಯ ಸಂಪತ್ತನ್ನು ಹೊಂದಿದೆ. ಪದ್ಯ, ಕವನ, ಕಾವ್ಯ, ವಚನ, ಭಾವಗೀತೆ, ಕೀರ್ತನೆ ಮುಂತಾದವುಗಳನ್ನು ಹೊಂದಿರುವ “ಗೇಯನುಡಿ”ಯಾಗಿದೆ.
ಕನ್ನಡ ಕಲಿ ಒಂದು ಪರಿಚಯಾತ್ಮಕವಾದ ಕಾರ್ಯಕ್ರಮವಾಗಿದ್ದು, ಇದರಲ್ಲಿ ವರ್ಣಮಾಲೆಯ ಪರಿಚಯದಿಂದ ಆರಂಭವಾಗಿ ಬಾಲಗೀತೆಗಳನ್ನು ಕಲಿಸುವ ಪ್ರಯತ್ನ ಮಾಡಲಾಗಿದೆ. ಇದನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಆಲೋಚನೆ ಇದೆ.
ಕನ್ನಡ ಭಾಷಾ ಆರಂಭಿಕ ಅಭ್ಯಾಸಿಗಳಿಗಾಗಿ ರಚಿತವಾದ ಕಾರ್ಯಕ್ರಮ ಇದು.
ಪಠ್ಯಕ್ರಮದ ಅವಧಿ -1 ತಿಂಗಳು,ಜಾಲತಾಣ ಮಾಧ್ಯಮದ ಮೂಲಕ; ಕಲಿಕೆಯ ಗರಿಷ್ಠ ಅವಧಿ 3 ತಿಂಗಳುಗಳು. ಪರೀಕ್ಷೆಯಲ್ಲಿ ಸಫಲತೆಯ ತರುವಾಯ ಪ್ರಮಾಣಪತ್ರವನ್ನು ನೀಡಲಾಗುವುದು. ವಿವರಗಳಿಗೆ ಸಂಪರ್ಕಿಸಿ.
ಕನ್ನಡ ನಾಡು ಸಾಹಿತ್ಯ ಸಂಸ್ಕೃತಿಗಳೇ ಅಲ್ಲದೆ ವಾಣಿಜ್ಯ ಕ್ಷೇತ್ರದಲ್ಲಿಯೂ ವಿರಾಜಿಸ್ತುತ್ತಿದೆ. ಆಧುನಿಕ ಯುಗದಲ್ಲಿ ಕನ್ನಡ ನಾಡು ಬಹು ಸಂಸ್ಕೃತಿಗಳ ಸಂಕೀರ್ಣವಾಗಿ ಹೊರಬರುತ್ತಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಳಿಸಿಕೊಳ್ಳಲು ಕನ್ನಡವನ್ನು ವಾಣಿಜ್ಯಿಕ ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚಾಗಿ ಬಳಸುವುದು ಅನಿವಾರ್ಯವಾಗಿದೆ.
ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ರುಚಿಸುವಂತೆ “ವಾಣಿಜ್ಯ ಕನ್ನಡ” ಕಾರ್ಯಕ್ರಮವನ್ನು ಹೊರತರಲಾಗಿದೆ. ಇದರಲ್ಲಿ ವ್ಯವಹಾರಗಳಲ್ಲಿನ ಕನ್ನಡದ ಬಳಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕಲಿಕೆಯನ್ನು ರೂಪಿಸಲಾಗಿದೆ.
ಅಭ್ಯಾಸದ ಅವಧಿ: 6 (ಆರು)ತಿಂಗಳುಗಳು.
ಕಲಿಕೆಯ ಮಾಧ್ಯಮ : ಅಂತರ್ಜಾಲದ ತರಗತಿಗಳು
ಕಲಿಕೆಯ ಮಾದರಿ :ಸ್ವಾಧ್ಯಾಯ
ಪ್ರತಿ ಅಧ್ಯಾಯದ ಅಂತ್ಯದಲ್ಲಿ ಅಭ್ಯಾಸ ಪ್ರಶ್ನೆಗಳು ಮತ್ತು ಪರೀಕ್ಷಾ ಪ್ರಶ್ನೆಗಳು ಇರುತ್ತವೆ.
ಭಾಷೆಯು ಸಂಸ್ಕೃತಿಯ ಪ್ರಸರಣ ಮಾಧ್ಯಮ. ಭಾಷೆಯ ಸೊಬಗು ಅದರ ವ್ಯಾಕರಣ ಛಂದಸ್ಸು, ಅಲಂಕಾರ, ಸಾಹಿತ್ಯಗಳನ್ನು ಅವಲಂಬಿಸಿರುತ್ತದೆ.ಭಾಷಾ ಶಕ್ತಿಯು ಅದರ ಸಮರ್ಪಕ ಬಳಕೆಯ ಮೇಲೆ ನಿರ್ಧಾರಿತವಾಗಿರುತ್ತದೆ. ನಾಡಿನ ಸಂಸ್ಕೃತಿಯನ್ನು ಮುಂದುವರಿಸಲು ಮುಂದಿನ ಪೀಳಿಗೆಯನ್ನು ಜಾಗರೂಕರನ್ನಾಗಿ ಮಾಡಬೇಕಾಗುತ್ತದೆ.
ಭಾಷೆಯ ಅಧ್ಯಯನಕ್ಕೆ ವ್ಯಾಕರಣದ ಅರಿವು ಅತ್ಯಗತ್ಯ. ಪ್ರಸ್ತುತ ಸಂದರ್ಭದಲ್ಲಿನ ಅಗತ್ಯತೆಯನ್ನು ಮನಗಂಡು ವಿದ್ಯಾರ್ಥಿಗಳಿಗಾಗಿ ಈ ತರಗತಿಯನ್ನು ಆರಂಭಿಸಲಾಗಿದೆ. ಪಠ್ಯಕ್ರಮದಲ್ಲಿ ಶ್ರೀ.ಪಂಜೆಯವರ ಪದ್ಧತಿಯನ್ನು ಅನುಸರಿಸಲಾಗಿದೆ.
ಅಭ್ಯಾಸದ ಅವಧಿ: 6 (ಆರು) ತಿಂಗಳುಗಳು.
ಕಲಿಕೆಯ ಮಾಧ್ಯಮ : ಅಂತರ್ಜಾಲದ ತರಗತಿಗಳು
ಕಲಿಕೆಯ ಮಾದರಿ :ಸ್ವಾಧ್ಯಾಯ
ಪ್ರತಿ ಅಧ್ಯಾಯದ ಅಂತ್ಯದಲ್ಲಿ ಅಭ್ಯಾಸ ಪ್ರಶ್ನೆಗಳು ಮತ್ತು ಪರೀಕ್ಷಾ ಪ್ರಶ್ನೆಗಳು ಇರುತ್ತವೆ.
ಕನ್ನಡವು ಅತಿ ಸಂಪದ್ಭರಿತವಾದ ಭಾಷೆ.. ಕನ್ನಡ ಸಾಹಿತ್ಯದ ಸೊಬಗನ್ನು ಸವಿಯಲು ಕನ್ನಡ ಭಾಷಾ ಛಂದಸ್ಸಿನ ಅರಿವು ಅತಿ ಮುಖ್ಯ. ಕನ್ನಡವನ್ನು ಅಭ್ಯಸಿಸಲು ಬಯಸುವರಿಗೆ ಅನುಕೂಲವಾಗುವಂತೆ ಕನ್ನಡ ಛಂದಸ್ಸನ್ನು ಸೂಕ್ಷ್ಮವಾಗಿ ಪರಿಚಯಿಸುವ ಯತ್ನವನ್ನು ಮಾಡಲಾಗಿದೆ.
ಅಭ್ಯಾಸದ ಅವಧಿ: 6 (ಆರು)ತಿಂಗಳುಗಳು.
ಕಲಿಕೆಯ ಮಾಧ್ಯಮ : ಅಂತರ್ಜಾಲದ ತರಗತಿಗಳು
ಕಲಿಕೆಯ ಮಾದರಿ :ಸ್ವಾಧ್ಯಾಯ
ಪ್ರತಿ ಅಧ್ಯಾಯದ ಅಂತ್ಯದಲ್ಲಿ ಅಭ್ಯಾಸ ಪ್ರಶ್ನೆಗಳು ಮತ್ತು ಪರೀಕ್ಷಾ ಪ್ರಶ್ನೆಗಳು ಇರುತ್ತವೆ.
ಆಚಾರ್ಯ ಬಿ ಎಮ್ ಶ್ರೀ ಯವರ ಕನಸನ್ನು ನನಸು ಮಾಡಲು ಬಹು ಸಂಖ್ಯೆಯಲ್ಲಿ ಶ್ರಮದಾನ ನಡೆಯಬೇಕಾಗಿದೆ. ಇದಕ್ಕೆ ತಕ್ಕಮಟ್ಟಿನ ಕುಶಲತೆಯ ಅವಶ್ಯಕತೆಯೂ ಇದೆ. ಅಪ್ರಕಟಿತ ಕೃತಿಗಳನ್ನು ಬೆಳಕಿಗೆ ತರುವ ಪ್ರಯತ್ನದಲ್ಲಿರುವ ಸಂಶೋಧಕ ಸಂಪಾದಕರಿಗೆ ಸಹಾಯಕರ ಅತಿ ಅಗತ್ಯವಿದೆ. ಇಂತಹ ಶಕ್ತಿಯನ್ನು ಬೆಳೆಸಲು ಗ್ರಂಥ ಸಂಪಾದನಾ ಸಹಾಯಕ ಕಾರ್ಯಕ್ರಮವು ಸಹಕಾರಿಯಾಗಿದೆ.
ಗ್ರಂಥಸಂಪಾದನಾ ಕಾರ್ಯದಲ್ಲಿ ಅವಶ್ಯಕವಿರುವ ಕುಶಲತೆಗಳನ್ನು ಪರಿಚಯಿಸುವ ಪಠ್ಯಕ್ರವನ್ನು ಆಧರಿಸಿ ಇದನ್ನು ರಚಿಸಲಾಗಿದೆ.
ಅಭ್ಯಾಸದ ಅವಧಿ: 6 (ಆರು)ತಿಂಗಳುಗಳು.
ಕಲಿಕೆಯ ಮಾಧ್ಯಮ : ಅಂತರ್ಜಾಲದ ತರಗತಿಗಳು
ಕಲಿಕೆಯ ಮಾದರಿ :ಸ್ವಾಧ್ಯಾಯ
ಪ್ರತಿ ಅಧ್ಯಾಯದ ಅಂತ್ಯದಲ್ಲಿ ಅಭ್ಯಾಸ ಪ್ರಶ್ನೆಗಳು ಮತ್ತು ಪರೀಕ್ಷಾ ಪ್ರಶ್ನೆಗಳು ಇರುತ್ತವೆ.
ಕನ್ನಡ ಬೆರಳಚ್ಚು ಬರವಣಿಗೆ ಆಡಳಿತ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಬಹಳ ಮುಖ್ಯವಾದ ಕಲೆ. ಅದರಲ್ಲಿಯೂ ಇಂದಿನ ತಾಂತ್ರಿಕ ಯುಗದಲ್ಲಿ ಹಲವಾರು ಬಗೆಯ ತಂತ್ರಾಂಶಗಳು ಬಳಕೆಯಲ್ಲಿವೆ. ಇವುಗಳಲ್ಲಿ “ನುಡಿ”ತಂತ್ರಾಂಶ ಕರ್ನಾಟಕದಲ್ಲಿ ಹೆಸರಾದದ್ದು. ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಅನುಕೂಲವಾಗುವಂತೆ , ಅವರ ಪರಿಣತಿಯನ್ನು ಪರೀಕ್ಷಿಸಿ ಪ್ರಮಾಣ ಪತ್ರವನ್ನು ನೀಡಲಾಗುವುದು.
.
.
.
ಅನಿವಾಸಿ ಕನ್ನಡಿಗ ಬಾಂಧವರೆ ! ಬನ್ನಿ ಮತ್ತೊಮ್ಮೆ ಕನ್ನಡದ ಬಾವುಟವನ್ನು ವಿಶ್ವದೆತ್ತರದಲ್ಲಿ ಹಾರಿಸೋಣ. ಮನುಜ ಮತ ವಿಶ್ವ ಪಥ ದ ಮಾರ್ಗದಲ್ಲಿ ಸಂಚರಿಸುತ್ತ "ವಿಶ್ವ ಸಂವಿಧಾನ" ಕ್ಕಾಗಿ ಶ್ರಮಿಸೋಣ.
ಇವರ ಆಶ್ರಯದಲ್ಲಿ, ವಿಶ್ವ ಸಂವಿಧಾನ ಮತ್ತು ಸಂಸತ್ ಸಂಸ್ಥೆ, 88, ಆರಕಲ್ ವೇ, ಇಂಡಿಪೆಂಡೆನ್ಸ್, ವರ್ಜೀನಿಯಾ 24348 C/o world Constitution and Parliament Association, 88 Oracle Way, Independence, VA 24348
ದೂರವಾಣಿ :91-9353463886 (ಭಾರತ) ಮಿಂಚಂಚೆ: wcpablr@gmail.com
Today | Closed |
ಪೂರ್ವ ನಿಯೋಜಿತ ಭೇಟಿ ಮಾತ್ರ
We use cookies to analyze website traffic and optimize your website experience. By accepting our use of cookies, your data will be aggregated with all other user data.
Welcome to Koushal Vikas Foundation !
Join us in our special Initiative " घर घर उद्यमी” -"An Entrepreneur from every Home" program aims to support Emerging Entrepreneurs through our Skill Development programs for a Strong Economy & Vibrant India.
-Director (Programs)